ಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದ ಸಂಸ್ಕೃತಿಯನ್ನು ಬಿಂಬಿಸುವ
ಸಾಂಪ್ರದಾಯಿಕ ದಿನವನ್ನು ಬ್ರಿಲಿಯಂಟ್ ಸಭಾಂಗಣದಲ್ಲಿ ಆಚರಿಸಲಾಯಿತು. ದೀಪವನ್ನು ಬೆಳಗಿಸಿ ಸಾಂಪ್ರದಾಯಿಕ ದಿನದ
ಉದ್ಘಾಟಣೆಯನ್ನು ಮಾಡಿದ ಬ್ರಿಲಿಯಂಟ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಸಿಎ.ರಾಮ ಮೋಹನ ರೈ ಯವರು
ಮಾತನಾಡಿ, “ಭಾರತೀಯ ಭವ್ಯ ಸಂಸ್ಕೃತಿಯನ್ನು ಇಂದಿನ ಜನಾಂಗ ಮರೆಯದೆ ಮತ್ತು ಪಾಶ್ಚಾತ್ಯ ಜೀವನ ಶೈಲಿಗೆ ಹೆಚ್ಚು
ಒತ್ತು ನೀಡದೆ, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಬೇಕು” ಎಂದರು.
ಬ್ರಿಲಿಯಂಟ್ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿಂದುಸಾರ ಶೆಟ್ಟಿ ಯವರು ಮಾತನಾಡಿ, ಭಾರತದ
ಭವ್ಯ ಸಂಸ್ಕೃತಿ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ಯಕ್ಷಗಾನ, ಕಥಕ್ಕಳಿ, ಭರತನಾಟ್ಯ, ವಾಸ್ತುಶಿಲ್ಪ, ಯೋಗ
ಮುಂತಾದವುಗಳು ಭಾರತ ಪ್ರಪಂಚಕ್ಕೆ ನೀಡಿದ ಕೊಡುಗೆ. ನಮ್ಮಲ್ಲಿರುವ ಸಂಸ್ಕೃತಿ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು
ವಿಶ್ವಪ್ರಸಿದ್ಧಿಯನ್ನು ಪಡೆಯುವಂತೆ ಮಾಡುವುದು ಇಂದಿನ ಯುವ ಜನಾಂಗದ ಕರ್ತವ್ಯ ಹಾಗೂ ಹೊಣೆ ಆಗಿದೆ ಇದರತ್ತ
ಹೆಚ್ಚಿನ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಕರೆಯಿತ್ತರು.
ಭಾರತದ ಸಂಸ್ಕೃತಿಯನ್ನು ಬಿಂಬಿಸುವ, ಆಚರಣೆ ಮತ್ತು ಸಾಂಪ್ರದಾಯಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಹಾಲಕ್ಷ್ಮೀ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕೃಷ್
ಅತ್ತಾವರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಿಗಾಗಿ ದೇಶೀಯ ಉಡುಗೆ ಮತ್ತು ಅದರ ಉದ್ದೇಶದ ಬಗ್ಗೆ
ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.