ಪ್ರಸ್ತುತ ಪರಿಸ್ಥಿತಿಯ ಶಿಕ್ಷಣದಲ್ಲಿ ಅಧ್ಯಾಪಕರ ಮತ್ತು ಪೋಷಕರ ಪಾತ್ರ ಶ್ಲಾಘನೀಯ – ಪ್ರೊ|| ವಸಂತ್ ಕುಮಾರ್ ನಿಟ್ಟೆ

ಬ್ರಿಲಿಯಂಟ್ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ “ವಿದ್ಯಾರ್ಥಿಗಳ (Online) ಅಧ್ಯಯನ,
ಪರೀಕ್ಷೆ ಮತ್ತು ಅದರ ಅಭ್ಯಾಸ” ವಿಷಯಗಳ ಬಗ್ಗೆ ವಿಚಾರ – ವಿನಿಮಯ ಕಾರ್ಯಕ್ರಮವು, ವಿದ್ಯಾರ್ಥಿಗಳ
ಪೋಷಕರು ಮತ್ತು ಅಧ್ಯಾಪಕರೊಂದಿಗೆ ಇತ್ತೀಚಿಗೆ ಬ್ರಿಲಿಯಂಟ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ವಿಚಾರ-ವಿನಿಮಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಂಜುಮಾನ್ ವಿದ್ಯಾಸಂಸ್ಥೆ ಜೋಕಟ್ಟೆ
ಇದರ ಆಡಳಿತಾಧಿಕಾರಿ ಪ್ರೊ|| ವಸಂತ್ ಕುಮಾರ್ ನಿಟ್ಟೆ ಅವರು ಮಾತನಾಡಿ “ಕೋವಿಡ್ – 19ರ ಪರಿಣಾಮ
ಜಾಗತಿಕ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಅಧ್ಯಯನ, ಅಭ್ಯಾಸ,
ಅಧ್ಯಾಪಕರ ಮಾರ್ಗದರ್ಶನದಲ್ಲಿ ಆನ್ಲೈನ್ ಮುಖಾಂತರ ನಡೆಯುವುದರಿಂದ ಮುಖಾಮುಖಿ ಅಧ್ಯಯನ ಮತ್ತು
ವೈಯಕ್ತಿಕ ಕಾಳಜಿ ಕಠಿಣ ಸಾಧ್ಯ ಈ ನಿಟ್ಟಿನಲ್ಲಿ ತಂದೆ – ತಾಯಿಯವರ ಪಾತ್ರ ಮಹತ್ವವಾಗಿದ್ದು, ವಿದ್ಯಾರ್ಥಿಯ
ಅಧ್ಯಯನಕ್ಕೆ ಅಧ್ಯಾಪಕರ ಜೊತೆಗೆ ಕೈಜೋಡಿಸಬೇಕಾಗಿರುವುದು ಅನಿವಾರ್ಯ. ಬ್ರಿಲಿಯಂಟ್ ಸಂಸ್ಥೆ ಈ ನಿಟ್ಟಿನಲ್ಲಿ
ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಕಳೆದ 33 ವರ್ಷಗಳಿಂದ ಬ್ರಿಲಿಯಂಟ್ ಪಿ. ಯು ಕಾಲೇಜು ಮೌಲ್ಯಾಧಾರಿತ
ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಾ ಬಂದಿದ್ಡು, ಬೇರೆ ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ರಿಲಿಯಂಟ್ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸಿ.ಎ. ರಾಮ್
ಮೋಹನ್ ರೈ ಮಾತನಾಡಿ, “ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಆನ್ಲೈನ್ ತರಗತಿಗೆ ಹಾಜರಾಗಿ,
ಕಾಲೇಜಿನ ನಿಯಮಗಳಿಗೆ ಬದ್ದರಾಗಿ ಉನ್ನತ ಶಿಕ್ಷಣ ಪಡೆದು ಜವಾಬ್ದಾರಿಯುತ ಪ್ರಜೆಯಾಗಲು ವಿದ್ಯಾರ್ಥಿಗಳ
ತಂದೆ – ತಾಯಿ ಕಾಲೇಜಿನ ಅಧ್ಯಾಪಕರೊಂದಿಗೆ ಸಹಕಾರ ನೀಡುವುದು ಅತೀ ಅಗತ್ಯ ಮತ್ರವಲ್ಲದೇ ಕೋವಿಡ್ –
19 ಸಮಸ್ಯೆಯಿಂದ ಶಿಕ್ಷಣ ವ್ಯವಸ್ಥೆ ಶೋಚನೀಯವಾಗಿದ್ದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸದಾ
ಶ್ರಮಿಸಬೇಕು” ಎಂದರು.
ಉಪನ್ಯಾಸಕ ಶ್ರೀ ರಮೇಶ್ ಕಲ್ಲಡ್ಕರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ|| ಬಿಂದುಸಾರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ
ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮ, ಪರೀಕ್ಷಾ ತಯಾರಿ, ವಿದ್ಯಾರ್ಥಿಗಳಿಗೆ ಅಧ್ಯಯನ ವ್ಯವಸ್ಥೆ,
ಅಧ್ಯಾಪಕರಿಗೆ ಸಲಹೆ ಸೂಚನೆ ಇತರ ವಿಷಯಗಳ ಬಗ್ಗೆ ವಿಸ್ತೃತ ವಿವರಣೆ ನೀಡಿದರು.
ಕಾಲೇಜಿನ ಆಡಳಿತಾಧಿಕಾರಿ ಶ್ರೀ ಅವೀಕ್ಷಿತ್ ರೈ ವಂದಿಸಿದರು, ಉಪಪ್ರಾಂಶುಪಾಲರಾದ
ಸಿ.ಎ. ಗುರುಚರಣ್ರವರು ಉಪಸ್ಥಿತರಿದ್ದರು ಹಾಗೂ ಉಪನ್ಯಾಸಕಿ ಕುಮಾರಿ ಸ್ನೇಹಾ ಕಾರ್ಯಕ್ರಮ
ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪೋಷಕರ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು
ಆಯ್ಕೆಮಾಡಲಾಯಿತು.

Leave a Reply

Your email address will not be published. Required fields are marked *