ಬ್ರಿಲಿಯಂಟ್ ಪಿ ಯು ಕಾಲೇಜಿನ 9ನೇ ವಾರ್ಷಿಕೋತ್ಸವ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಮಂಗಳೂರು ದಕ್ಷಿಣ ವಲಯದ, ಕರ್ನಾಟಕದ ಶಾಸಕಾಂಗ ಸಭೆಯ ಗೌರವಾನ್ವಿತ ಸದಸ್ಯ ಶ್ರೀ
ಡಿ. ವೇದವ್ಯಾಸ್ ಕಾಮತ್ ಅವರು ಮಾತನಾಡಿ, “ವಿದ್ಯಾರ್ಥಿಗಳು ಹೆಚ್ಚಿನ ಮುತುವರ್ಜಿಯಿಂದ ವಿದ್ಯಾರ್ಜನೆ ಮಾಡಿ
ದೇಶಕ್ಕೆ ಕೀರ್ತಿ ತರಬೇಕು, ಉತ್ತಮ ವಿದ್ಯಾರ್ಜನೆಯೊಂದಿಗೆ ಉತ್ತಮ ನಡತೆಯನ್ನು ಪಡೆದು ಹೆತ್ತವರಿಗೆ ಮತ್ತು
ಸಮಾಜಕ್ಕೆ ಉತ್ತಮಕೊಡುಗೆಯಾಗಬೇಕು. ಮಕ್ಕಳು ಯಾವತ್ತೂ, ಕೆಟ್ಟ ಬುದ್ಧಿಯನ್ನು ಕಲಿತು ಹೆತ್ತವರು ಕಣ್ಣೀರು
ಹಾಕುವ ಸನ್ನಿವೇಶಕ್ಕೆ ಅವಕಾಶ ಕೊಡಬಾರದು” ಎಂದು ಹಿತವಚನ ನುಡಿದರು. ಯೆನೆಪೊಯಾ ದಂತ ಕಾಲೇಜಿನ
ಸಹಾಯಕ ಪ್ರಾಧ್ಯಾಪಕರಾದ ಡಾ.ಸುಬ್ರಮಣ್ಯ ಶೆಟ್ಟಿಯವರು ಮಾತನಾಡಿ “ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ
ಶಿಸ್ತುವಿಗೂ ಆಧ್ಯತೆ ನೀಡಬೇಕು” ವ್ಯಕ್ತಿಯು ಯಾವ ಉದ್ಯೋಗವನ್ನು ಕಲಿತರೂ, ಅದು ಡಾಕ್ಟರ್ ಆಗಲಿ,ಇಂಜಿನಿಯರ್
ಆಗಲಿ, ವಕೀಲ ಆಗಲಿ ಅಥವಾ ವ್ಯವಹಾರವೇ ಆಗಿರಲಿ ಮೊದಲು ಒಳ್ಳೆಯ ವ್ಯಕ್ತಿಯಾಗಬೇಕು, ಒಳ್ಳೆಯ ವ್ಯಕ್ತಿಗಳಿಗೆ
ಒಳ್ಳೆಯ ಗೌರವ, ಬೆಲೆ ಸಮಾಜದಲ್ಲಿ ಇದ್ದೇ ಇದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜಕ್ಕೆ ಉತ್ತಮ
ಕೊಡುಗೆಯಾಗಬೇಕು” ಎಂದರು.
ಬ್ರಿಲಿಯಂಟ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಸಿಎ.ರಾಮ ಮೋಹನ ರೈ ಅವರು ಮಾತನಾಡಿ,
“ವಿದ್ಯಾರ್ಥಿಗಳು ವಾರ್ಷಿಕೋತ್ಸವದಲ್ಲಿ ತೋರಿರುವ ಹುಮ್ಮಸ್ಸು ಮುಂಬರುವ ಪರೀಕ್ಷೆಗಳಲ್ಲಿಯೂ ತೋರುವಂತಾಗಲಿ
ಇದಕ್ಕಾಗಿ ಹೆಚ್ಚಿನ ಪರಿಶ್ರಮವನ್ನು ವಿದ್ಯಾರ್ಥಿಗಳು ನೀಡಬೇಕಾಗುವುದು ಅಗತ್ಯ” ಎಂದು ಎಲ್ಲರಿಗೂ ಶುಭ
ಹಾರೈಸಿದರು.
ಬ್ರಿಲಿಯಂಟ್ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿಂದುಸಾರ ಶೆಟ್ಟಿಯವರು ಕಾಲೇಜಿನ 2019-
20ನೇ ಶೈಕ್ಷಣಿಕ ವರದಿ ಒದಿದರು. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ
ಬಹುಮಾನ ವಿತರಿಸಲಾಯಿತು. ದ್ವಿತೀಯ ಪಿ ಯು ಸಿ Public ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು
ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.ಈ ಶೈಕ್ಷಣಿಕ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಾದ ಪೃಥ್ವಿ ಪ್ರಕಾಶ್,
ಸ್ವಾತಿ ಅರ್ಶೇಕರ್, ಶೇಕ್ ಸನಾದ್ ಮತ್ತು ಶಿವಾನಿ ಇವರನ್ನು ಅಭಿನಂದಿಸಲಾಯಿತು. ವರ್ಷದ ಅತ್ಯುತ್ತಮ ಶಿಕ್ಷಕರನ್ನು
ಈ ಸಂದರ್ಭದಲ್ಲಿ ಗೌರವಿಸಲಾಯಿತು. ಲಿಟಲ್ ಶೋನಾ ವರ್ಲ್ಡ್ ಸ್ಕೂಲ್ ನ ನಿರ್ದೇಶಕಿ ಶ್ರೀಮತಿ ಕೀರ್ತಿ ಆರ್.ರೈ
ಅವರು ಬಹುಮಾನ ವಿತರಣೆ ಮಾಡಿದರು. ಬ್ರಿಲಿಯಂಟ್ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್
ಶೆಟ್ಟಿಯವರು ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಯೋಗಿತ ಸ್ವಾಗತಿಸಿದರು. ವಾಣಿಜ್ಯ
ವಿಭಾಗದ ಉಪನ್ಯಾಸಕಿ ಐಶ್ವರ್ಯ ವಂದನಾರ್ಪಣೆಗೈದರು. ಎಚ್ ಅರ್ ಡಿ ವಿಭಾಗದ ಸುಚಿತ್ರ ಕಾರ್ಯಕ್ರಮ
ನಿರೂಪಿಸಿದರು. ಉಪನ್ಯಾಸಕಿ ಶ್ರೀಮತಿ ಆಶಾಲತಾ ಕಾರ್ಯಕ್ರಮ ನಿರ್ವಹಿಸಿದರು.