ಬ್ರಿಲಿಯಂಟ್ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ PUC ಪರೀಕ್ಷೆಯಲ್ಲಿ ಅತ್ಯುತ್ತಮ
ಅಂಕಗಳಿಸಿದ ವಿದ್ಯಾರ್ಥಿಗಳನ್ನು “HONOURING OF BRILLIANT STARS” ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ದಿನಾಂಕ 12-೦9-2020 ರಂದು, ಬ್ರಿಲಿಯಂಟ್ ಕಾಲೇಜು ಸಭಾಂಗಣದಲ್ಲಿ ನಡೆದ “HONOURING OF
BRILLIANT STARS” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಜೀವಿನಿ ಹಾಲಿಸ್ಟಿಕ್
ವೆಲ್ನೆಸ್ ಸೆಂಟರಿನ ನಿರ್ದೇಶಕಿ ಶ್ರೀಮತಿ ರೇವತಿ ಸನಿಲ್ ಮಾತನಾಡಿ, “ಬ್ರಿಲಿಯಂಟ್ ಸಂಸ್ಥೆ,
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮಕ್ಕಳ ಪರಿಶ್ರಮ ಮತ್ತು ಪ್ರತಿಭೆ
ಗುರುತಿಸುವ ನಿಟ್ಟಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತದೆ ಮತ್ತು ಕಾಲೇಜಿನ
ಶಿಕ್ಷಕ ವೃಂದದ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ರಿಲಿಯಂಟ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ CA ರಾಮ ಮೋಹನ ರೈ
ಮಾತನಾಡಿ, “ವಿದ್ಯಾರ್ಥಿಗಳ ಈ ಉತ್ತಮ ಫಲಿತಾಂಶಕ್ಕೆ ಅವರ ಸತತ ಪರಿಶ್ರಮ, ಹೆತ್ತವರ ಪ್ರೇರಣೆ ಹಾಗೂ
ನಮ್ಮ ಸಂಸ್ಥೆಯ ಅನುಭವಿ ಅಧ್ಯಾಪಕ ವೃಂದದ ಮಾರ್ಗದರ್ಶನ, ಮಾತ್ರವಲ್ಲದೆ ಕಳೆದ 34 ವರ್ಷಗಳಿಂದ
ಶಿಕ್ಷಣ ಕ್ಷೇತ್ರದಲ್ಲಿ ಸತತ ಪರಿಶ್ರಮ ಮತ್ತು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ಫಲವಾಗಿದೆ”
ಎಂದರು. ಉಪನ್ಯಾಸಕರಾದ ಶ್ರೀ ರಮೇಶ್ ಕಲ್ಲಡ್ಕ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ
ಪ್ರಾರಂಭವಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ|| ಬಿಂದುಸಾರ ಶೆಟ್ಟಿ ಸ್ವಾಗತಿಸಿ ಅತಿಥಿಗಳನ್ನು
ಪರಿಚಯಿಸಿದರು. ಕಾಲೇಜಿನ ಆಡಳಿತಾಧಿಕಾರಿ ಶ್ರೀ ಅವೀಕ್ಷಿತ್ ರೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ
ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ 625 ರಲ್ಲಿ 621 ಅಂಕಗಳನ್ನು ಪಡೆದ ಶ್ರೀಜನ್ ಎಸ್. ಭಟ್ ಮತ್ತು
ಮತ್ತು 622 ಅಂಕಗಳನ್ನು ಪಡೆದ ಪ್ರಕೃತಿ ಡಿ. ಯವರನ್ನು ಸನ್ಮಾನಿಸಲಾಯಿತು. ಇದಲ್ಲದೆ 2019-20ನೇ
ಸಾಲಿನ ಹತ್ತನೇ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರತಿ ಪಠ್ಯವಿಷಯಗಳಲ್ಲಿ 100 ರಲ್ಲಿ 100
ಅಂಕಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟ
ವಿದ್ಯಾರ್ಥಿಗಳ ಹೆತ್ತವರು ಹಾಗೂ ಪೋಷಕರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ಚೈತನ್
ವಂದಿಸಿದರು ಮತ್ತು ಉಪನ್ಯಾಸಕಿ ಕುಮಾರಿ ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು.